ಕಣ್ಣಲಿ ಇಳಿದ ಕನಸು ನಿನ್ನದಲ್ಲ,
ಮನದಲಿ ಮೊಳಕೆಯೊದಗಿದ ನೆನೆಪೂ ನಿನ್ನದಲ್ಲ,
ಮೌನವಾಗಿ ಕಳೆದ ಕ್ಷಣವೂ ನಿನ್ನದಲ್ಲ,
ಮುಗಿಯದ ಈ ವೇದನೆಯೂ ನಿನ್ನದಲ್ಲ.
ಹೃದಯ ತೋಡಿದ ಮಾತು ನಿನ್ನದಲ್ಲ,
ಆತ್ಮ ತಟ್ಟಿದ ಸ್ಪರ್ಶ ನಿನ್ನದಲ್ಲ,
ಸಮಾಧಿ ಹತ್ತಿದ ಪ್ರೀತಿ ನಿನ್ನದಲ್ಲ,
ಮುಗಿಯದ ಯಾತನೆಯೂ ನಿನ್ನದಲ್ಲ.
ಹೊರಟು ಹೋದ ನಗು ನಿನ್ನದಲ್ಲ,
ಮುಗಿದಿಲ್ಲದ ಕಾತರ ನಿನ್ನದಲ್ಲ,
ಚುಕ್ಕಿಗಳ ಮಧ್ಯೆ ಹುಡುಕಿದ ಆತ್ಮ ನಿನ್ನದಲ್ಲ,
ಈ ಶೂನ್ಯದಲ್ಲೂ ಮಿಂಚಿದ ನೆನಪು ನಿನ್ನದಲ್ಲ.
ಹತ್ತಿ ಬಂದದು ನಿನ್ನದಲ್ಲ,
ತೊರೆದು ಹೋದದು ನಿನ್ನದಲ್ಲ,
ನೀನಿಂದ ಸಿಕ್ಕದು ನಿಜವಲ್ಲ,
ನೀನು ಕಾಪಾಡಿದದು ಶಾಶ್ವತವಲ್ಲ.
ಜೀವದಲ್ಲಿ ಬಂದ ನೋವು ನಿನ್ನದಲ್ಲ,
ಬಿಟ್ಟ ಕನಸುಗಳ ಹೊತ್ತು ನಿನ್ನದಲ್ಲ,
ಒಮ್ಮೆ ಹತ್ತಿದ ಆ ಮೌನ ನಿನ್ನದಲ್ಲ,
ಇದರ ಎಲ್ಲ ಅಂತ್ಯವೂ ನಿನ್ನದಲ್ಲ.
ಕಳೆದು ಕೊಂಡಿದು ನಿನ್ನದಲ್ಲ ,
ಕಳೆದು ಹೋದದ್ದು ನಿನ್ನದಲ್ಲ
ಬಿಟ್ಟು ಕೊಟ್ಟಿದ್ದು ನಿನ್ನದಲ್ಲ
ಬಿಟ್ಟುಹೋದದ್ದು ನಿನ್ನದಲ್ಲ
ನಿಂದು ಅಂತ ಇರೋದು ಇದು ಒಂದೇ,
ಈ ಕ್ಷಣ ಈ ದಿನ..