ನನ್ನೊಬಾ ರಾಮಗುಣಗಳು ಇರುವ ರಾವಣಾಸುರನಾ ?

ನಾನು ಒಬ್ಬ ನಿಜವಾದ ರಾಮನು ಅಲ್ಲ. ಆದರೂ ರಾಮನ ಗುಣಗಳನ್ನ ಪೋಷಿಸುತ್ತಾ ಬಂದಿದ್ದೆ.
ಸತ್ಯವನ್ನ ಮಾತಾಡೋದರಲ್ಲಿ ಹೆಮ್ಮೆ ಇದೆ, ಧರ್ಮಪಥವನ್ನ ಬಿಟ್ಟಿಲ್ಲ, ಬೇರೆಯವರಿಗೆ ಸಹಾಯ ಮಾಡುವ ಮನಸ್ಸು ನನ್ನೊಳಗೆ ಇವತ್ತು ಕೂಡ ಇದೆ.
ಆದ್ರೆ ಹೇಳ್ತೀನಿ, ನಾನು ಸಂಪೂರ್ಣ ಶುದ್ಧ ಅಲ್ಲ.
ಓದುಗನೇ, ನಾನೂ ನಿನ್ನಂಥವನೇ.
ಒಂದೊಂದು ಕ್ಷಣದಲ್ಲಿ, ನನ್ನೊಳಗಿನ ರಾವಣ ಎದ್ದೇಳ್ತಾನೆ.
ಒಂದೊಂದೇ ಕ್ಷಣದಲ್ಲಿ, ನನ್ನೊಳಗಿನ ರಾವಣ ಎದ್ದೇಳ್ತಾನೆ.
ಅವನಿಗೆ ಸ್ವಾರ್ಥ ಗೊತ್ತು, ಹಠ ಗೊತ್ತು, ಕೋಪ ಗೊತ್ತು, ಇಮ್ಮಿ-ಇಮ್ಮಿ ಮಾಯೆ ಗೊತ್ತು.
ಒಮ್ಮೆ ನಾನಾಗೋ ನೀತಿ ಉಚ್ಚಾರಿಸುತ್ತೀನಿ, ಮುಂದಿನ ಕ್ಷಣ ಸುಮ್ಮನೆ ಈ ಅಹಂಕಾರದ ಹೊಲೆಯಲ್ಲಿ ಉಸಿರಾಡ್ತೀನಿ.


ನನ್ನ ದೇಹ – ರಾಮನ ಕಟ್ಟಿಗೆ, ಆದರೆ ಮನಸ್ಸು – ರಾವಣನ ಅಗ್ನಿ!
ಒಂದೇ ದೇಹದಲ್ಲಿ ಎರಡು ತತ್ವ.
ಒಂದೇ ಬುದ್ಧಿಯಲ್ಲಿ ಎರಡು ಧ್ವನಿ.
ಒಂದೇ ನಿರ್ಣಯದ ಹಿಂದೆ ಎರಡು ನಡವಳಿಕೆ.
ಒಂದೆಡೆ ಕಣ್ಣು ಬಡವರ ನೋವನ್ನ ಕಾಣುತ್ತೆ, ಇನ್ನೊಂದೆಡೆ ಮನಸ್ಸು ನನ್ನ ಆದಾಯ-ಹೆಮ್ಮೆ-ಪದವಿ ಕಡೆ ಓಡುತ್ತೆ.


ಒಂದೆಡೆ ಕೈ ತಪ್ಪಿದವನು ಎದ್ದು ನಿಲ್ಲಲಿ ಅನ್ನಿಸುತ್ತೆ, ಮತ್ತೊಂದೆಡೆ “ಅವನ ಬಡಾವಣೆ ನನಗೆ ಎಡವಣೆ ಇಲ್ಲವೋ?” ಅನ್ನೋ ಚಿಂತೆ ಎದ್ದೇಳುತ್ತೆ.
ನನ್ನೊಳಗಿನ ಯುದ್ಧವೊಂದು ಒಂದೇ ಯುಗದ ಕಥೆಯಲ್ಲ.
ಪ್ರತಿ ಉಸಿರೂ ಒಂದು ಸಂಕಟ, ಪ್ರತಿ ನಿರ್ಧಾರವೂ ಒಂದು ಸಮರ.
ನನ್ನೊಳಗಿನ ಕಾಮ – ರಾವಣನ ಮೊದಲ ಶಸ್ತ್ರ.
ಅದು ಸುಂದರತೆಯ ಮೇಲಿರಬಹುದು, ಯಶಸ್ಸಿನ ಮೇಲಿರಬಹುದು, 
ಅದು ನನ್ನ ಬುದ್ಧಿಗೆ ಲಾಲನೆ ನೀಡುತ್ತೆ,
ಆದರೆ ಆತ್ಮಕ್ಕೆ ಹುರುಳಾಗುತ್ತೆ.
ಅದೇ ಸಮರದ ನಡುವೆ, ಎಡಗಡೆಯಿಂದ ನಡುಕವಾಗಿ ಕೇಳಿಸೊದು ರಾಮ ಚೈತನ್ಯದ ಧ್ವನಿ.
“ಬೇಡವೋ ನಿನ್ನೊಳಗಿನ ಬೆಳಕಿಗೆ ಮರೆಮಾಡಿಸೋ ಆಸೆಗಳಿಗೆ ತಲೆಬಾಗೋದೆ,” ಅಂತ ಕೇಳುತ್ತದೆ.
ಅದೇ ನಾನು ತಟಸ್ಥನಾಗಬೇಕಾದ ಪ್ರಜ್ಞಾ ಶಕ್ತಿ –
ಹೃದಯವ ಹಿಂದೂಳಿಸುತ್ತಾ, ದಿಕ್ಕು ತೋರಿಸೋ ಜ್ಯೋತಿ.


ಆದ್ರೆ, ಓಹ್! ಏನೆಲ್ಲ ಆಸೆಗಳಿಗೆ ಒಮ್ಮೆ ಕಿವಿಗೊಡ್ತೀನಿ ಅಂದ್ರೆ,
ಅದೇ ಕ್ಷಣ ಲಕ್ಷ್ಮಣನ ಎಚ್ಚರಿಕೆಯಂತೆ ನನ್ನ ಒಳಗಿನ ಧರ್ಮಬುದ್ಧಿ ಎಚ್ಚರಿಸುತ್ತೆ –
“ನೀನು ಯಾರ ಕಡೆ ಹೋಗ್ತಾ ಇದ್ದೀಯೋ ನೋಡ!”
ಆ ಎಚ್ಚರಿಕೆಯ ಪ್ರತಿ ಕೂಗು, ನನ್ನನ್ನು ಮೋಹದಿಂದ ಹೊರತರುತ್ತೆ.
ನನ್ನೊಳಗಿನ ರಾಮ – ಚೈತನ್ಯ.
ನನ್ನೊಳಗಿನ ಲಕ್ಷ್ಮಣ – ಎಚ್ಚರಿಕೆ.
ಆದರೆ ರಾವಣ?
ಅವನು ನನ್ನೊಳಗಿನ ಸಂಶಯ, ಅಭಿಮಾನ, ಅಹಂಕಾರ.
ಅವನಿಗೆ ಸಾಕಷ್ಟು ಹೆಸರುಗಳಿವೆ –
“ನನಗೇಕೆ ಸಿಕ್ಕಲ್ಲ?”,
“ಅವನಿಗಾದ್ದು ನಾನೇ ಏಕೆ ಮುರಿದು ಕೊಡಬೇಕು?”,
“ನನ್ನಷ್ಟು ಯಾರೂ ಇವೆನಾ?”
ಈ ಮಾತುಗಳು ಅವನ ತಂತ್ರಗಳು.
ಹಾಗೆ ನೋಡಿದರೆ,
ನಾನು ರಾಮನ ದಾರಿ ಹಿಡಿದ ಯೋಧ.
ಆದರೆ ಮರುಕ್ಷಣ – ಕಾಮದ ರಣದಲ್ಲಿ, ರಾವಣನ ಓಟದಲ್ಲಿ, ಮೋಹದ ಹೊಟೆಯಲ್ಲಿ – ನಾನು ದಿಕ್ಕುತಪ್ಪಿ ಹೋಗಿರುತ್ತೇನೆ.
ಆದ್ರೆ, ನಾನು ಗೆದ್ಧಿಲ್ಲ ಅಂತಾ ನಿಷ್ಕರ್ಷೆ ಬೇಡ.
ನಾನು ಸೋತಿಲ್ಲ ಅಂತಾ ಅಭಿಮಾನವೂ ಬೇಡ.
ನಾನು ಹೋರಾಟದೊಳಗಿದ್ದೀನಿ – ಅಷ್ಟೆ ಸಾಕು.
ನಾನು ರಾಮನ ಹೃದಯವನ್ನ ಉಳಿತಿದ್ದೀನಿ, ಆದರೆ

ರಾವಣನ ನೆರಳಲ್ಲಿ ನಡೆಯುತ್ತಿದ್ದೀನಿ.
ನಿಮ್ಗೂ ಈ ಭಾವನೆ ಇದೆ ಅಂತ nange gothu
ಇದು ನನ್ನ feelings ಅಲ್ಲ, ನಮ್ಮಲ್ಲರ feelings 
ಈ ಯುಗದಲ್ಲಿ ನಾವು ಎಲ್ಲರೂ ‘ದ್ವಂದ್ವಾತ್ಮ’ಗಳು – ಒಳಗಿನ ಯುದ್ಧವೇ ನಿಜವಾದ ಯುದ್ಧ.
ಇಲ್ಲಿಯವರೆಗೆ ಯಾರು ಗೆದ್ದಿಲ್ಲ. ನಾನು ಗೆದ್ದಿಲ್ಲ. ನಾನು ಸೋತಿಲ್ಲ.
ಆದರೆ ದಿನವೂ ನಾನು ಯೋಧ.
ಒಂದು ಕ್ಷಣ ರಾಮ, ಒಂದು ಕ್ಷಣ ರಾವಣ.


ಓಟಿನಲ್ಲಿ ನನ್ನಲಿ ಇರುವ ರಣವನಾಸುರನ ಗುಣಗಳನ್ನು ಕೊಲುವ ರಾಮನಾಗಬೇಕೆಂಬ ನಿರಂತರ ಪ್ರಯತ್ನ…